Files
first-contributions/docs/translations/README.ka.md
T
Roshan Jossy ad2f2d31b4 Merge pull request #103743 from AkhileshKotwal7/first-ocss
Kannada translations enhanced for reading
2025-10-05 13:46:53 +02:00

96 lines
11 KiB
Markdown

[![Open Source Love](https://firstcontributions.github.io/open-source-badges/badges/open-source-v1/open-source.svg)](https://github.com/firstcontributions/open-source-badges)
[![License: MIT](https://img.shields.io/badge/License-MIT-green.svg)](https://opensource.org/licenses/MIT)
[![Open Source Helpers](https://www.codetriage.com/roshanjossey/first-contributions/badges/users.svg)](https://www.codetriage.com/roshanjossey/first-contributions)
# ಮೊದಲ ಕೊಡುಗೆಗಳು
ಈ ಯೋಜನೆಯು ಆರಂಭಿಕರು ತಮ್ಮ ಮೊದಲ ಕೊಡುಗೆಯನ್ನು ನೀಡುವ ವಿಧಾನವನ್ನು ಸರಳಗೊಳಿಸುವ ಮತ್ತು ಮಾರ್ಗದರ್ಶನ ಮಾಡುವ ಗುರಿಯನ್ನು ಹೊಂದಿದೆ. ನಿಮ್ಮ ಮೊದಲ ಕೊಡುಗೆಯನ್ನು ನೀಡಲು ನೀವು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ.
ನೀವು ಆಜ್ಞಾ ಸಾಲಿನೊಂದಿಗೆ ಆರಾಮದಾಯಕವಲ್ಲದಿದ್ದರೆ,[GUI ಉಪಕರಣಗಳನ್ನು ಬಳಸುವ ಟ್ಯುಟೋರಿಯಲ್‌ಗಳು ಇಲ್ಲಿವೆ.](#tutorials-using-other-tools)_

ನಿಮ್ಮ ಯಂತ್ರದಲ್ಲಿ ನೀವು ಗಿಟ್ ಹೊಂದಿಲ್ಲದಿದ್ದರೆ,[ಅದನ್ನು ಸ್ಥಾಪಿಸಿ](https://help.github.com/articles/set-up-git/)
## ಈ ರಿಪಾಸಿಟರಿ ಫೋರ್ಕ್ ಮಾಡಿ
ಈ ಪುಟದ ಮೇಲ್ಭಾಗದಲ್ಲಿರುವ ಫೋರ್ಕ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ರಿಪಾಸಿಟರಿಯನ್ನು ಫೋರ್ಕ್ ಮಾಡಿ.
ಇದು ನಿಮ್ಮ ಖಾತೆಯಲ್ಲಿ ಈ ರಿಪಾಸಿಟರಿಯ ನಕಲನ್ನು ರಚಿಸುತ್ತದೆ.
## ರಿಪಾಸಿಟರಿ ಕ್ಲೋನ್

ಈಗ ನಿಮ್ಮ ಯಂತ್ರಕ್ಕೆ ಫೋರ್ಕ್ಡ್ ರಿಪಾಸಿಟರಿಯನ್ನು ಕ್ಲೋನ್ ಮಾಡಿ. ನಿಮ್ಮ ಗಿಟ್-ಹಬ್ ಖಾತೆಗೆ ಹೋಗಿ, ಫೋರ್ಕ್ ಮಾಡಿದ ರಿಪಾಸಿಟರಿಯನ್ನು ತೆರೆಯಿರಿ, "Code" ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ "copy to clipboard" ಐಕಾನ್ ಅನ್ನು ಕ್ಲಿಕ್ ಮಾಡಿ - ಇದು URL(ವೆಬ್‌ ವಿಳಾಸ) ಅನ್ನು ನಕಲಿಸುತ್ತದೆ[ಕಾಪಿ ಮಾಡುತ್ತದೆ].
ಟರ್ಮಿನಲ್ ತೆಗೆದು ಈ ಕೆಳಗಿನ ಗಿಟ್ ಆಜ್ಞೆಯನ್ನು ಚಲಾಯಿಸಿ:

git clone "copied URL"

ಇಲ್ಲಿ "copied URL" - ನೀವು ಈಗಷ್ಟೇ ನಕಲಿಸಿದ URL(ನೀವು ಫೋಕ೯ ಮಾಡಿದ ಪ್ರಾಜೆಕ್ಟ ಲಿಂಕ್) ಅನ್ನು ಉದ್ಧರಣ[""] ಚಿಹ್ನೆಗಳಿಲ್ಲದೆ ಈ ಸ್ಥಳಕ್ಕೆ ಸೇರಿಸಿ.

ಉದಾಹರಣೆಗೆ:

git clone https://github.com/this-is-you/first-contributions.git

`this-is-you' ಅಂದ್ರೆ ನಿಮ್ಮ ಗಿಟ್‌ಹಬ್ ಖಾತೆಯ ಹೆಸರು.
ಇಲ್ಲಿ ನೀವು ನಿಮ್ಮ ಕಂಪ್ಯೂಟರ್‌ಗೆ ಗಿಟ್‌ಹಬ್‌ನಲ್ಲಿನ first-contributions ಯೋಜನೆಯನ್ನು ನಕಲಿಸುತ್ತಿದ್ದೀರಿ.
## ಒಂದು ಶಾಖೆಯನ್ನು ರಚಿಸಿ
ನಿಮ್ಮ ಕಂಪ್ಯೂಟರ್‌ನಲ್ಲಿ first-contributions ರಿಪಾಸಿಟರಿ ಕಡತಕ್ಕೆ ಬದಲಾಯಿಸಿ (ನೀವು ಈಗಾಗಲೇ ಇಲ್ಲದಿದ್ದರೆ):

cd first-contributions

ಈಗ `git checkout` ಆಜ್ಞೆಯನ್ನು ಬಳಸಿಕೊಂಡು ಒಂದು ಶಾಖೆಯನ್ನು ರಚಿಸಿ:

git checkout -b <ನಿಮ್ಮ ಹೊಸ-ಶಾಖೆ-ಹೆಸರನ್ನು ಸೇರಿಸಿ>

ಉದಾಹರಣೆಗೆ:

git checkout -b add-alonzo-church

(ಶಾಖೆಯ ಹೆಸರಿನಲ್ಲಿ `add` ಎಂಬ ಪದವನ್ನು ಹೊಂದುವ ಅಗತ್ಯವಿಲ್ಲ, ಆದರೆ ಇದನ್ನು ಸೇರಿಸುವುದು ಸಮಂಜಸವಾದ ವಿಷಯ ಏಕೆಂದರೆ ಈ ಶಾಖೆಯ ಉದ್ದೇಶವು ನಿಮ್ಮ ಹೆಸರನ್ನು ಪಟ್ಟಿಗೆ ಸೇರಿಸುವುದು.)
## ಅಗತ್ಯ ಬದಲಾವಣೆಗಳನ್ನು ಮಾಡಿ -‌ ಕಮಿಟ್ ಮಾಡಿ
ಈಗ ಪಠ್ಯ ಸಂಪಾದಕದಲ್ಲಿ `Contributor.md` ಫೈಲ್ ಅನ್ನು ತೆರೆಯಿರಿ, ಅದಕ್ಕೆ ನಿಮ್ಮ ಹೆಸರನ್ನು ಸೇರಿಸಿ. ಅದನ್ನು ಫೈಲ್‌ನ ಪ್ರಾರಂಭ ಅಥವಾ ಕೊನೆಯಲ್ಲಿ ಸೇರಿಸಬೇಡಿ. ನಡುವೆ ಎಲ್ಲಿಯಾದರೂ ಸೇರಿಸಿ.
ಈಗ, ಫೈಲ್ ಅನ್ನು ಸೇವ್‌ ಮಾಡಿ.

ನೀವು ಪ್ರಾಜೆಕ್ಟ್ ಡೈರೆಕ್ಟರಿಗೆ ಹೋಗಿ `git status` ಆಜ್ಞೆಯನ್ನು ಕಾರ್ಯಗತಗೊಳಿಸಿದರೆ, ನೀವು ಮಾಡಿದ ಬದಲಾವಣೆ ಕಾಣಿಸುತ್ತವೆ.
`git add` ಆಜ್ಞೆಯನ್ನು ಬಳಸಿ, ಬದಲಾಯಿಸಿದ ಫೈಲ್‌ನ್ನು ಸ್ಟೇಜ ಮಾಡಿ.

git add Contributors.md

ಈಗ `git commit` ಆಜ್ಞೆಯನ್ನು ಬಳಸಿಕೊಂಡು ಆ ಬದಲಾವಣೆಗಳನ್ನು ಕಮಿಟ್ ಮಾಡಿ:

git commit -m "add name to contributors"

"add name to contributors" ಇದು ಕಮಿಟ್‌ ಸಂದೇಶ. ನೀವು ಮಾಡಿದ ಬದಲಾವಣೆಗೆ ತಕ್ಕಂತೆ ಸಂದೇಶವು ಅಥ೯ಪೂಣ೯ವಾಗಿರಬೇಕು
## ಬದಲಾವಣೆಗಳನ್ನು ಗಿಟ್‌ಹಬ್‌ಗೆ ಪುಶ್ ಮಾಡಿ
`Git push` ಆಜ್ಞೆಯನ್ನು ಬಳಸಿಕೊಂಡು ನಿಮ್ಮ ಬದಲಾವಣೆಗಳನ್ನು ಗಿಟ್‌ಹಬ್‌ಗೆ ಕಳುಹಿಸಿರಿ:

git push origin <add-your-branch-name>

`<add-your-branch-name>` ಈ ಸ್ಥಳದಲ್ಲಿ ನೀವು ರಚಿಸಿದ ಬ್ರ್ಯಾಂಚ್‌ ಹೆಸರನ್ನು ಬರೆಯಿರಿ.
## ನಿಮ್ಮ ಬದಲಾವಣೆಗಳನ್ನು ವಿಮರ್ಶೆಗಾಗಿ ಸಲ್ಲಿಸಿ
ನೀವು ಗಿಟ್‌ಹಬ್‌ನಲ್ಲಿರುವ ನಿಮ್ಮ ಕಡತಕ್ಕೆ ಹೋದರೆ, ನೀವು `Compare & pull request` ಬಟನ್ ನೋಡುತ್ತೀರಿ. ಆ ಬಟನ್ನ್ನು ಕ್ಲಿಕ್ ಮಾಡಿ.

ಈಗ ಗಿಟ್‌ಹಬ್‌ ಪುಲ್ ವಿನಂತಿಯನ್ನು ಸಲ್ಲಿಸಿ.

ಶೀಘ್ರದಲ್ಲೇ ನಾನು ನಿಮ್ಮ ಎಲ್ಲಾ ಬದಲಾವಣೆಗಳನ್ನು ಈ ಯೋಜನೆಯ ಮಾಸ್ಟರ್ ಶಾಖೆಯಲ್ಲಿ ವಿಲೀನಗೊಳಿಸುತ್ತೇನೆ. ಬದಲಾವಣೆಗಳನ್ನು ವಿಲೀನಗೊಳಿಸಿದ ನಂತರ ನೀವು ಅಧಿಸೂಚನೆ ಇಮೇಲ್ ಅನ್ನು ಪಡೆಯುತ್ತೀರಿ.
## ಇಂದಿನಿಂದ ಏನು?
ಅಭಿನಂದನೆಗಳು! ನೀವು ಕೊಡುಗೆದಾರರಾಗಿ ಆಗಾಗ್ಗೆ ಎದುರಾಗುವ ಪ್ರಮಾಣಿತ _fork -> clone -> edit -> PR_ ವರ್ಕ್‌ಫ್ಲೋ ಅನ್ನು ನೀವು ಇದೀಗ ಪೂರ್ಣಗೊಳಿಸಿದ್ದೀರಿ!
ನಿಮ್ಮ ಕೊಡುಗೆಯನ್ನು ಸಂಭ್ರಮಿಸಿ ಮತ್ತು ಅದನ್ನು ನಿಮ್ಮ ಸ್ನೇಹಿತರು ಹಾಗು ಅನುಯಾಯಿಗಳೊಂದಿಗೆ ಹಂಚಿಕೊಳ್ಳಿ [ವೆಬ್ ಅಪ್ಲಿಕೇಶನ್](https://firstcontributions.github.io/#social-share).
ನೀವು ಹೆಚ್ಚಿನ ಅಭ್ಯಾಸವನ್ನು ಬಯಸಿದರೆ, ಪರಿಶೀಲಿಸಿ [ಕೋಡ್ ಕೊಡುಗೆಗಳು](https://github.com/roshanjossey/code-contributions).
ಈಗ ನೀವು ಹೆಚ್ಚಿನ ಯೋಜನೆಗಳಿಗೆ ಕೊಡುಗೆ ನೀಡಲು ಪ್ರಾರಂಭಿಸಬಹುದು. ನಾವು ನಿಮಗಾಗಿ ಒಂದು ಪಟ್ಟಿಯನ್ನು ತಯಾರಿಸಿದ್ದೇವೆ ಅದು ಬಹಳ ಸುಲಭವಾದ ಸಮಸ್ಯೆಗಳು. [ಯೋಜನೆಗಳ ಪಟ್ಟಿ](https://firstcontributions.github.io/#project-list)
## ಇತರ ಪರಿಕರಗಳನ್ನು ಬಳಸುವ ಟ್ಯುಟೋರಿಯಲ್

| [GitHub Desktop](../gui-tool-tutorials/github-desktop-tutorial.md) | [Visual Studio 2017](../gui-tool-tutorials/github-windows-vs2017-tutorial.md) | [GitKraken](../gui-tool-tutorials/gitkraken-tutorial.md) | [Visual Studio Code](../gui-tool-tutorials/github-windows-vs-code-tutorial.md) | [Atlassian Sourcetree](../gui-tool-tutorials/sourcetree-macos-tutorial.md) | [IntelliJ IDEA](../gui-tool-tutorials/github-windows-intellij-tutorial.md) |